Thursday, February 26, 2009

Haage Summane - Time pass

For a change, to avoid monotone, some days I travel to office by bus. Best part of the journey is when I am lucky, the red signal stops the bus at the very intersection. For 10 min or so, I get to see the marvelous aerobatics skills of Bramhini and Black Kites. Each Kite that rises from the sewage canal with its 'prized' catch has to face a swarm of more Kites which try to steal the prize and in the fight Kites exibit excellent flying skills. It's a treat to watch if one does not mind the stench!!

Today happens to be a day like that, though I did not get to see the 'Kite show'. While returning, bus was almost empty and I was in no mood to read. So I did something interesting, that I had been planning to do.

I had read this famous poem from Pablo Neruda. Lot of people had translated the English version to Kannada(including Dr Nissar Ahmad). I too tried my turn, not a bad thing to kill time in bus!! Here it goes....

'Love is short and oblivion is so long' - This line touched my heart.

ಈ ರಾತ್ರಿ ನಾ ಬರೆಯಬಲ್ಲೆ ಅತ್ಯಂತ ದುಃಖದ ಸಾಲುಗಳ

ಉದಾಹರಣೆಗೆ,
ಈ ರಾತ್ರಿ ಛಿದ್ರವಾಗಿದೆ, ನೀಲಿ
ನಕ್ಷತ್ರಗಳು ಚಡಪಡಿಸುತಿವೆ ದೂರದಲಿ.
ತಂಗಾಳಿ ಆಕಾಶವನ್ನು ಸುತ್ತುತಿದೆ
ವಿರಹಗೀತೆಯನು ಹಾಡುತಿದೆ.

ಈ ರಾತ್ರಿ ನಾ ಬರೆಯಬಲ್ಲೆ ಅತ್ಯಂತ ದುಃಖದ ಕವಿತೆಯ
ಅವಳನು ಪ್ರೇಮಿಸಿದೆ, ಕೆಲಕಾಲವಾದರೂ ಅವಳೆನ್ನ ಪ್ರೇಮಿಸಿದಳು

ಅವಳನು ಬಾಹುಬಂಧನದಲಿ ಬಳಸಿದ ರಾತ್ರಿಗಳೆಷ್ಟೋ
ಅನಂತ ಆಗಸದಡಿ ಅವಳನು ರಂಜಿಸಿದ ಚುಂಬನಗಳೆಷ್ಟೋ

ಅವಳೆನ್ನ ಪ್ರೇಮಿಸಿದಳು, ನಾನೂ ಸಹ ಮನಸಾರೆ ಪ್ರೀತಿಸಿದೆ
ದೀಪದಂತಿದ್ದ ಅವಳ ದಿಟ್ಟ ಕಂಗಳನ್ನು ಹೇಗೆ ಅನಾದರಿಸಲಿ

ಈ ರಾತ್ರಿ ನಾ ಬರೆಯಬಲ್ಲೆ ಅತ್ಯಂತ ದುಃಖದ ಕವಿತೆಯ
ಅವಳಿಲ್ಲದ ನೆನಪಿನಲಿ, ಅವಳನ್ನು ಕಳೆದುಕೊಂಡ ವೇತನೆಯಲಿ

ಈ ಗಾಢ ರಾತ್ರಿ, ಅವಳಿಲ್ಲದೆ ಮತ್ತಷ್ಟು ಘೋರ
ಈ ಕವಿತೆಯು ಅಂತರಾತ್ಮವನು ತಟ್ಟುತಿದೆ,
ಹುಲ್ಲಿನ ಮೇಲಿನ ಇಬ್ಬನಿಯ ತೆರದಿ

ನನ್ನವಳನ್ನಾಗಿಸಿಕೊಳ್ಳಲು ನನ್ನ ಪ್ರೀತಿ ಸೋತಿರಲು
ಚುಕ್ಕಿ ಚಂದ್ರಮರ ರಾತ್ರಿಯಲಿ ಅವಳೆನ್ನ ಜೊತೆಯಲಿಲ್ಲ

ಇದೆ ಅಂತ್ಯವೇ, ದೂರದಲ್ಲಿ ಯಾರೋ ಹಾಡುತ್ತಿದ್ದಾರೆ
ಅವಳಿಲ್ಲದೆ ನನ್ನ ಅಂತರಾತ್ಮ ಚೈತನ್ಯ ಹೀನವಾಗಿದೆ

ಅವಳನ್ನು ಕರೆತರಲು ನನ್ನ ಕಣ್ಣುಗಳು ತಡವುತಿದೆ
ಹೃದಯವು ಚಡಪಡಿಸುತಿದೆ, ಅವಳೆನ್ನ ಬಳಿಯಿಲ್ಲದೆ

ಇದೇ ರಾತ್ರಿ, ಮರಗಳನು ಬೆಳಗಿಸುವ ರಾತ್ರಿ
ನಾವು, ನಾವಿದ್ದರೂ, ನಾವಾಗಿ ಉಳಿದಿಲ್ಲ

ನಾನಿನ್ನು ಅವಳನು ಪ್ರೇಮಿಸದಿರಬಹುದು, ಅದೆಷ್ಟು ಪ್ರೀತಿಸಿದೆ ಅವಳನ್ನಂದು
ನನ್ನ ದನಿ ಗಾಳಿಯನ್ನು ಭೇಧಿಸಿ ಅವಳನು ಅರಸುತಿತ್ತಂದು

ಹಿಂದೆ ನನ್ನ ಪ್ರೇಮದ ದೇವತೆಯಗಿದ್ದವಳು,
ಅವಳೀಗ ಅನ್ಯರಿಗೊಲಿದಳೇ?
ಅವಳ ಶಾರೀರ, ಅವಳು, ಅವಳ ಅನಂತ ಕಂಗಳು

ಅವಳನು ಪ್ರೀತಿಸದಿರಲು ನನ್ನಿಂದ ಸಾದ್ಯವೇ?
ಪ್ರೀತಿ ಕ್ಷಣಿಕ, ಮರೆಯುವುದು ಬಲು ದೀರ್ಘ

ಅವಳನು ಬಾಹುಬಂಧನದಲಿ ಬಳಸಿದ ರಾತ್ರಿಗಳೆಷ್ಟೋ
ಅವಳಿಲ್ಲದೆ ನನ್ನ ಅಂತರಾತ್ಮ ಚೈತನ್ಯ ಹೀನವಾಗಿದೆ

ಇದು ಅವಳಿಂದಾಗುವ ನೋವುಗಳ ಕೊನೆಯೇ?
ಇದು ನಾನು ಅವಳಿಗರ್ಪಿಸುವ ಕೊನೆಯ ಕವಿತೆಯೇ?

I do not take any credit for the above translation. It is just an humble effort to feel Pablo Neruda's emotions in my mother tongue.

3 comments:

Sridhar M said...

Wow, Shashi - you should take a shot at poetry more often!

I agree, traveling when you don't ride/drive is a different experience, especially when put to such excellent use!

Vishwanath.N said...

Sumadhuravaagide ninna translation...adu haage munduvareyali

Anonymous said...

nijakkU bahaLa sogasagide anuvaada.
tumba hiDisitu. mattashTu bareyiri.
bahaLa kaDime padagaLalli chennAgi bhavagaLanna hiDidiTTiddeeri.

link neeDiddakke thanks.

Vande,
Chetana Teerthahalli