ಕಳೆದ ವಾರ ಕೊನೆಗೂ ಪಂಚರಂಗಿಯ ರಂಗನ್ನು ಕಾಣುವ ಕನಸು ನನಸಾಯಿತು. ನನಗನ್ನಿಸಿದ ಪ್ರಕಾರ ಚಿತ್ರದಲ್ಲಿ ಸ್ವಲ್ಪ ರಂಗಿನ ಕೊರತೆ ಎದ್ದು ಕಾಣುತ್ತಿತ್ತು. ನಿರ್ದೇಶಕರು ಬಹಳ ಕಡೆ ಬೂದಿ(gray color) ಬಣ್ಣವನ್ನು ಹಾಗೆ ಉಳಿಸಿ ಬಿಟ್ಟಂತೆ ಅನ್ನಿಸಿತು. ಹಾಡುಗಳು ಸಹ ಮತ್ತೆ ಗುನುಗುವಂತೇನೂ ಇರಲಿಲ್ಲ, ಒಂದನ್ನು ಹೊರತು ಪಡಿಸಿ. ಆದರು FM Radio ದಲ್ಲಿ ಪ್ರಸಾರವಾಗುವ ಹಾಡಿಗೂ, ಮೂಲತಹ ಚಿತ್ರದಲ್ಲಿರುವ ಹಾಡಿಗೂ ಬಹಳ ವ್ಯತ್ಯಾಸ ಇದೆ. I like the one broadcasted on FM Radio.
ಅದು ಹೇಗೇ ಇರಲಿ ಚಿತ್ರದ ಸಂದೇಶ ನನಗೆ ಇಷ್ಟವಾಯಿತು. ನಿರ್ದೇಶಕರು ಇದಕ್ಕೆ ಎರಡು ಆಯಾಮಗಳನ್ನು ಕೊಟ್ಟಿದ್ದಾರೆ. ಒಂದು ಕಡೆ ಪೋಷಕರ "herd following" ದೃಷ್ಟಿಕೋನ, ಮಗ ವಿದೇಶಕ್ಕೆ ಹೋದರೇನೇ ಉದ್ದಾರ ಆದಂತೆ, ಹರಕು-ಮುರುಕು ಅಂಗ್ಲ ಭಾಷೆ ಮಾತಾಡಿದರೇನೆ ಸಮಾಜದಲ್ಲಿ ಗೌರವ ಎಂದು ಭಾವಿಸುವ ಪೋಷಕರು. ಇನ್ನೊಂದು ಕಡೆ ನಾಯಕನ ಅಸಡ್ಡೆತನ, ಜೀವನ ಬರಿ ನಶ್ವರ ಎಂದು, ಕಂಡದ್ದೆಲ್ಲವನ್ನು ತೆಗಳುವ ನಿರ್ಲಿಪ್ತ ಮನೋಭಾವ. ಇದೆಲ್ಲದರ ನಡುವೆಯೇ ಸುಂದರವಾದ ಜೀವನ ಒಂದು ಇದೆ ಎಂದು ತೋರಿಸಲು ಹೊರಟಿದ್ದಾರೆ.
ಅದೇನೇ ಆಗಲಿ ಚಿತ್ರದಲ್ಲಿ ಪರಿಚಯಿಸಿರುವ ಒಂದು ರೀತಿಯ ಪ್ರಾಸಬದ್ದ ಸಂಭಾಷಣೆಯನ್ನು ಮನೆಯಲ್ಲೆಲ್ಲ ಹೇಳಿ ಚೆನ್ನಾಗಿ ಬೈಸಿಕೊಂಡು ಖುಷಿ ಪಟ್ಟುಕೊಂಡೆ. ಈಗ ನಿಮಗೂ ಸ್ವಲ್ಪ ತಲೆ ತಿನ್ನುತ್ತೇನೆ, ತಾಳ್ಮೆ ಇದ್ದಾರೆ ಓದಿಕೊಳ್ಳಿ...
ನಾವುಗಳು - ನಮ್ಮನ್ನು ಕಾಡಿಸುವ bugಗು ಗಳು
ದಿನಕ್ಕೊಂದು ಹುಟ್ಟಿಕೊಳ್ಳುವ platformಗಳು,
ಅವುಗಳೆಲ್ಲದರ ಮೇಲೆ application ಬರೆಯುವ ನಾವುಗಳು,
Windows, Mac, Linux Operating systemಗಳು,
ಇತ್ತೀಚೆಗೆ ಬಂದ android, iOS ಗಳು,
mobile phoneಗಳು, tablet PCಗಳು,
iPad, Galaxyಗಳು,
officeನ ಹೊರಗೆ ರಸ್ತೆಯಲ್ಲಿ ಬರೀ ಹಳ್ಳಗಳು,
ಅವುಗಳ ಮೇಲೆ ಓಡುವ ನಮ್ಮ ಮೋಟಾರು ವಾಹನಗಳು,
ಕೈಗೆಟುಕದ ಬೆಲೆಗಳು,
ಮಿತಿ ಇಲ್ಲದ ನಮ್ಮ ಹವ್ಯಾಸಗಳು,
ಲೆಕ್ಕವಿರದ TV channelಗಳು,
ಅದರಲ್ಲಿ ಬರುವ ಧಾರಾವಾಹಿಗಳು,
ಇವನ್ನು ನೋಡದೆ ಇರಲಾಗದ ಅಜ್ಜಿ-ತಾತ ಗಳು,
ಇವೆಲ್ಲದರ ಮದ್ಯೆ ಇರುವ ನಾವುಗಳು ನಮ್ಮ ಕನಸುಗಳು!!!
Life is colorful, see it through a kaleidoscope to make it more eventful.
1 comment:
haadu sakkatagi ide...Font swalpa sariyagi kaansalla ..next bariyovaga background change maadu ...
Post a Comment